Select Your Language

Notifications

webdunia
webdunia
webdunia
webdunia

ಮತ್ತು ಬರಿಸಿ ನಗ್ನ ವಿಡಿಯೋ ಮಾಡಿ ನಟಿಗೆ ವಂಚನೆ

ಮತ್ತು ಬರಿಸಿ ನಗ್ನ ವಿಡಿಯೋ ಮಾಡಿ ನಟಿಗೆ ವಂಚನೆ
ಲಕ್ನೋ , ಸೋಮವಾರ, 25 ಅಕ್ಟೋಬರ್ 2021 (09:18 IST)
ಲಕ್ನೋ: ಉದಯೋನ್ಮುಖ ನಟಿಗೆ ಮತ್ತು ಬರಿಸುವ ಔಷಧ ನೀಡಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ನಗ್ನ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಲಕ್ನೋದಲ್ಲಿ ನಡೆದಿದೆ.

ಈ ಸಂಬಂಧ ಇಬ್ಬರು ಯುವತಿಯರು ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ವೆಬ್ ಸೀರೀಸ್ ನಲ್ಲಿ ಅವಕಾಶ ನೀಡುವುದಾಗಿ ನಟಿಗೆ ಮತ್ತು ಬರಿಸುವ ಔಷಧ ನೀಡಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಆರೋಪಿಗಳು ನಗ್ನ ವಿಡಿಯೋ ಮಾಡಿದ್ದರು.

ಬಳಿಕ ಈ ವಿಡಿಯೋಗಳನ್ನು ಬಹಿರಂಗಪಡಿಸದೇ ಇರಲು 5 ಲಕ್ಷ ರೂ.ಗಳ ಬೇಡಿಕೆಯಿಟ್ಟಿದ್ದರು. ಆದರೆ ಕೇಳಿದ ಹಣ ಕೊಡದೇ ಹೋದಾಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟಿದ್ದರು.  ಈ ಸಂಬಂಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಆರೋಪಿಗಳನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಳು ವರ್ಷದ ಮಗುವಿನ ಮೇಲೆ ಬಿತ್ತು ಕಾಮುಕನ ಕಣ್ಣು