Select Your Language

Notifications

webdunia
webdunia
webdunia
webdunia

ಮೂರು ತಿಂಗಳ ಹಸುಗೂಸ ಕೊಂದ ತಾಯಿ

ಮೂರು ತಿಂಗಳ ಹಸುಗೂಸ ಕೊಂದ ತಾಯಿ
ಪುಣೆ , ಸೋಮವಾರ, 25 ಅಕ್ಟೋಬರ್ 2021 (09:50 IST)
ಪುಣೆ: ಹೆತ್ತ ತಾಯಿ ಎಂದಿಗೂ ಕೆಟ್ಟವಳಾಗಲಾರಳು ಎಂಬ ಮಾತನ್ನು ಇಲ್ಲೊಬ್ಬ ತಾಯಿ ಸುಳ್ಳು ಮಾಡಿದ್ದಾಳೆ. ತನ್ನ ಮೂರು ತಿಂಗಳ ಹಸುಗೂಸನ್ನೇ ಕೊಲೆ ಮಾಡಿದ್ದಾಳೆ.

ಮಹಿಳೆ ಗಂಡನಿಂದ ಪ್ರತ್ಯೇಕವಾಗಿದ್ದಳು. ಇದೀಗ ಇನ್ನೊಬ್ಬನೊಡನೆ ಅಕ್ರಮ ಸಂಬಂಧ ಹೊಂದಿದ್ದಳು. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ತನ್ನ ಅಕ್ರಮ ಸಂಬಂಧ ಮರೆ ಮಾಚಲು ಆ ಹಸುಗೂಸನ್ನು ಕೊಲೆ ಮಾಡಿ 13 ವರ್ಷದ ಪುತ್ರನ ಜೊತೆ ಸೇರಿಕೊಂಡು ದೇಹ ಮಣ್ಣು ಮಾಡಲೆತ್ನಿಸಿದ್ದಳು.

ಆದರೆ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಪ್ರಾಪ್ತ ಬಾಲಕನನ್ನು ಪ್ರಶ್ನಿಸಿದಾಗ ಆತ ನಿಜಾಂಶ ಬಾಯಿಬಿಟ್ಟಿದ್ದಾನೆ. ಇದೀಗ ಅಮ್ಮ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್!