Publish Date: Tue, 26 Oct 2021 (17:28 IST)
Updated Date: Tue, 26 Oct 2021 (17:29 IST)
ಬೆಂಗಳೂರು: ವಂಚನೆ, ಅತ್ಯಾಚಾರ, ಹಲ್ಲೆ ಇತ್ಯಾದಿ ಆರೋಪಗಳ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನಟ ಶೇಷ್ ಎಂಬಾತನನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೆಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದ ಶೇಷ್, ಬ್ಯಾಂಕ್ ನಲ್ಲಿ ಕೆಲಸ ಕೊಡಿಸುವುದಾಗಿ ಯುವತಿಗೆ ವಂಚನೆ ಮಾಡಿದ್ದ. ಅಲ್ಲದೆ ಆಕೆಯಿಂದ ಹಣ ಪಡೆದುಕೊಂಡಿದ್ದ. ಜೊತೆಗೆ ಲೈಂಗಿಕವಾಗಿಯೂ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಈಗ ಸೆರೆಹಿಡಿದಿದ್ದಾರೆ.