Publish Date: Tue, 26 Oct 2021 (10:40 IST)
Updated Date: Tue, 26 Oct 2021 (10:41 IST)
ಬೆಂಗಳೂರು: ನಟ ಶಶಿಕುಮಾರ್ ಮತ್ತೆ ರಾಜಕೀಯ ಕಣಕ್ಕಿಳಿಯಲಿದ್ದಾರಾ? ಅಂತಹದ್ದೊಂದು ಸುದ್ದಿ ಇದೀಗ ಹರಿದಾಡುತ್ತಿದೆ.
ಚಿತ್ರದುರ್ಗದ ಮಾಜಿ ಸಂಸದರಾಗಿರುವ ಶಶಿಕುಮಾರ್ ಈಗ ಮತ್ತೆ ಕೋಟೆನಾಡಿನಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರಿನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
2008 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಳ್ಳಕೆರೆಯಿಂದ ಸ್ಪರ್ಧಿಸಿ ಸೋತಿದ್ದರು.ಇದೀಗ ಮತ್ತೆ ಚಳ್ಳಕೆರೆ ಮತ್ತು ಮೊಳಕಾಲ್ಮೂರಿನಲ್ಲಿ ಓಡಾಟ ನಡೆಸುತ್ತಿದ್ದು, ಮುಂದೆ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುವ ಇರಾದೆ ಇದೆ ಎನ್ನಲಾಗಿದೆ.