Publish Date: Wed, 27 Oct 2021 (09:05 IST)
Updated Date: Wed, 27 Oct 2021 (09:11 IST)
ಮುಂಬೈ: ಆರ್ಯನ್ ಖಾನ್ ಡ್ರಗ್ ಕೇಸ್ ವಿಚಾರಣೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಎನ್ ಸಿಪಿ ನಾಯಕ, ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮಾಡಿರುವ ಆರೋಪಗಳ ಬಗ್ಗೆ ಸಮೀರ್ ಪತ್ನಿ ಪ್ರತಿಕ್ರಿಯಿಸಿದ್ದಾರೆ.
ಸಮೀರ್ ಪ್ರಾಮಾಣಿಕ ಅಧಿಕಾರಿ. ನಾವು ಕೋಟಿ ಕೋಟಿ ಸಂಪಾದಿಸಿಲ್ಲ. ನಮ್ಮದು ಸಾಮಾನ್ಯ ಜೀವನ. ಹೀಗಾಗಿ ಯಾರ ಆರೋಪಗಳ ಬಗ್ಗೆಯೂ ಭಯವಿಲ್ಲ ಎಂದು ಸಮೀರ್ ಪತ್ನಿ ಕ್ರಾಂತಿ ರೇಡ್ಕರ್ ಹೇಳಿದ್ದಾರೆ.
ಆರ್ಯನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಹಣದ ಡೀಲ್ ನಡೆಸಿದ್ದಾರೆ. ಇದಕ್ಕೂ ಮೊದಲು ಈ ರೀತಿ ಹಣ ಅವ್ಯವಹಾರ ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ ಎಂದು ನವಾಬ್ ಮಲಿಕ್ ಆರೋಪಿಸಿದ್ದರು.