ಮುಂಬೈ: ಆರ್ಯನ್ ಖಾನ್ ಡ್ರಗ್ ಕೇಸ್ ನಲ್ಲಿ ನಟಿ ಅನನ್ಯಾ ಪಾಂಡೆಯನ್ನು ಈಗಾಗಲೇ ಎನ್ ಸಿಬಿ ಅಧಿಕಾರಿಗಳು ಎರಡು ಬಾರಿ ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣ ಅನನ್ಯಾಗೆ ದೊಡ್ಡ ನಷ್ಟವುಂಟು ಮಾಡಿದೆ ಎನ್ನುತ್ತಿವೆ ಬಾಲಿವುಡ್ ಮೂಲಗಳು.
ತಮಿಳು ಸ್ಟಾರ್ ನಟ ವಿಜಯ್ ನಾಯಕರಾಗಿರುವ ಹೊಸ ಸಿನಿಮಾವೊಂದಕ್ಕೆ ಅನನ್ಯಾ ನಾಯಕಿ ಎನ್ನಲಾಗುತ್ತಿತ್ತು. ಆದರೆ ಈಗ ಡ್ರಗ್ ಪೂರೈಸಿರುವ ಆರೋಪಕ್ಕೊಳಗಾದ ಅನನ್ಯಾ ಹೆಸರನ್ನು ಚಿತ್ರ ತಂಡ ಕೈಬಿಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ವಿಜಯ್ ಅಭಿನಯದ 66 ನೇ ಸಿನಿಮಾ ಇದಾಗಿತ್ತು. ಆದರೆ ಅನನ್ಯಾ ಆಪ್ತರು ವಿಜಯ್ ಸಿನಿಮಾಗೆ ಆಫರ್ ಬಂದಿಲ್ಲ ಎಂದು ಈ ಸುದ್ದಿಗಳನ್ನು ನಿರಾಕರಿಸಿದ್ದಾರೆ.