Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಅವಸ್ಥೆ ನೋಡಿ ಸಂಕಟವಾಯಿತು: ನಟಿ ಶ್ರುತಿ ಹರಿಹರನ್

ಶಾರುಖ್ ಖಾನ್ ಅವಸ್ಥೆ ನೋಡಿ ಸಂಕಟವಾಯಿತು: ನಟಿ ಶ್ರುತಿ ಹರಿಹರನ್
ಬೆಂಗಳೂರು , ಶುಕ್ರವಾರ, 22 ಅಕ್ಟೋಬರ್ 2021 (08:40 IST)
ಬೆಂಗಳೂರು: ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್ ನನ್ನು ನೋಡಲು ಹೋಗಿದ್ದ ಶಾರುಖ್ ಖಾನ್ ಪರಿಸ್ಥಿತಿ ನೋಡಿ ಸಂಕಟವಾಯಿತು ಎಂದು ನಟಿ ಶ್ರುತಿ ಹರಿಹರನ್ ಹೇಳಿಕೊಂಡಿದ್ದಾರೆ.


ನಿನ್ನೆ ಆರ್ಥರ್ ಜೈಲಿಗೆ ಭೇಟಿ ಕೊಟ್ಟಿದ್ದ ಶಾರುಖ್ ಖಾನ್ ಸ್ಥಿತಿ ಬಗ್ಗೆ ಶ್ರತು ಹರಿಹರನ್ ಸಾಮಾಜಿಕ ಜಾಲತಾಣದಲ್ಲಿ ಸಂಕಟ ವ್ಯಕ್ತಪಡಿಸಿದ್ದಾರೆ.

‘ಒಬ್ಬ ಸೂಪರ್ ಸ್ಟಾರ್ ಮಗನನ್ನು ಭೇಟಿ ಮಾಡಿ ಬರುವಾಗ ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಮುತ್ತಿಗೆ ಹಾಕಿದ್ದು ನೋಡಿ ಸಂಕಟವಾಯಿತು. ಈ ಸೋಷಿಯಲ್ ಪವರ್ ಹೇಗೆ ಕೆಲಸ ಮಾಡುತ್ತವೆ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಚಿಕ್ಕವರಲ್ಲ ಎನ್ನುವುದು ಸತ್ಯ. ಆದರೆ ಈ ವ್ಯವಸ್ಥೆ ನಿಜವಾಗಿ ಹೇಗೆ ಕೆಲಸ ಮಾಡುತ್ತವೆ ಎಂದು ಊಹಿಸುವ ವಿಚಾರದಲ್ಲಿ ಅನುಭವಗಳು ನನ್ನನ್ನು ಜಾಗೃತಗೊಳಿಸುತ್ತಿವೆ’ ಎಂದು ಶ್ರುತಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಠಾಣೆ ಮೆಟ್ಟಿಲೇರಿದ ಸಲಗ ಸಿನಿಮಾ ವಿವಾದ