Publish Date: Thu, 21 Oct 2021 (16:59 IST)
Updated Date: Thu, 21 Oct 2021 (17:01 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 30 ರವರೆಗೆ ಮುಂದೂಡಲಾಗಿದೆ.
ಸೆಷನ್ಸ್ ಕೋರ್ಟ್ ಆರ್ಯನ್ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದೆ. ನಿನ್ನೆಯಷ್ಟೇ ಮುಂಬೈನ ವಿಶೇಷ ಕೋರ್ಟ್ ಆರ್ಯನ್ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಶಾರುಖ್ ಪುತ್ರನನ್ನು ಭೇಟಿ ಮಾಡಲು ಆರ್ಥರ್ ಜೈಲಿಗೆ ಬಂದಿದ್ದರು.
ಇನ್ನು, ಆರ್ಯನ್ ಜೊತೆ ಸಂವಹನ ನಡೆಸಿದ ಮತ್ತಷ್ಟು ನಟ-ನಟಿಯನ್ನು ಎನ್ ಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಇಂದು ಶಾರುಖ್ ನಿವಾಸಕ್ಕೆ ಭೇಟಿ ನೀಡಿದ ಎನ್ ಸಿಬಿ ಅಧಿಕಾರಿಗಳು ಆರ್ಯನ್ ಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.