Publish Date: Wed, 20 Oct 2021 (16:21 IST)
Updated Date: Wed, 20 Oct 2021 (16:24 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ತಮ್ಮಿಂದ ಬಂಧಿತರಾದ ಆರ್ಯನ್ ಖಾನ್ ಮತ್ತು ಸಹಚರರ ಜಾಮೀನು ಅರ್ಜಿ ತಿರಸ್ಕಾರವಾದ ಬೆನ್ನಲ್ಲೇ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖಡೆ ನೀಡಿರುವ ಹೇಳಿಕೆ ವೈರಲ್ ಆಗಿದೆ.
ಆರ್ಯನ್ ಜಾಮೀನು ನಿರಾಕರಣೆ ಬೆನ್ನಲ್ಲೇ ಮಾಧ‍್ಯಮಗಳು ಸಮೀರ್ ಬಳಿ ಪ್ರತಿಕ್ರಿಯೆ ಕೇಳಿದಾಗ ಸತ್ಯಮೇವ ಜಯತೆ ಎಂದಿದ್ದಾರೆ. ಬೇರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇದೀಗ ಆರ್ಯನ್ ಪರ ವಕೀಲರು ಹೈಕೋರ್ಟ್ ಕದ ತಟ್ಟಲು ನಿರ್ಧರಿಸಿದ್ದಾರೆ. ಆರ್ಯನ್ ಖಾನ್ ಮತ್ತು ಇತರರ ಜಾಮೀನು ಅರ್ಜಿ ಪುರಸ್ಕರಿಸಬಾರದೆಂದು ಎನ್ ಸಿಬಿ ಕೋರ್ಟ್ ನಲ್ಲಿ ವಾದ ಮಂಡಿಸಿತ್ತು.