Publish Date: Wed, 20 Oct 2021 (09:15 IST)
Updated Date: Wed, 20 Oct 2021 (09:26 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡು ನ್ಯಾಯಾಂಗ ಬಂಧನದಲ್ಲಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ತೀರ್ಪು ಇಂದು ಹೊರಬೀಳಲಿದೆ.
ಆರ್ಯನ್ ಪರ ವಕೀಲರು ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
ಇದೀಗ ದಸರಾ ರಜಾ ಅವಧಿ ಮುಗಿಸಿ ಕೋರ್ಟ್ ಮತ್ತೆ ಕಾರ್ಯಚರಣೆ ಆರಂಭಿಸಿದ್ದು ಇಂದು ಆರ್ಯನ್ ಭವಿಷ್ಯ ತೀರ್ಮಾನಿಸಲಿದೆ. ಅಕ್ಟೋಬರ್ 7 ರಂದು ಆರ್ಯನ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.