ಮುಂಬೈ: ಡ್ರಗ್ ಕೇಸ್ ನಲ್ಲಿ ಜೈಲು ಪಾಲಾಗಿರುವ ಆರ್ಯನ್ ಖಾನ್ ಗೆ ತಂದೆ ಶಾರುಖ್ ಖಾನ್ ಕಡೆಯಿಂದ ಪಾಕೆಟ್ ಮನಿ ರೂಪದಲ್ಲಿ ಮನಿ ಆರ್ಡರ್ ಬಂದಿದೆ.
ಆರ್ಥರ್ ಜೈಲಿನಲ್ಲಿ ನ್ಯಾಯಾಂಗ ಬಂಧನ ಎದುರಿಸುತ್ತಿರುವ ಆರ್ಯನ್ ಗೆ ಜೈಲಿನ ನಿಯಮಗಳ ಪ್ರಕಾರ ಕ್ಯಾಂಟೀನ್ ಖರ್ಚಿಗೆ ಶಾರುಖ್ ಖಾನ್ ಮನಿ ಆರ್ಡರ್ ಕಳುಹಿಸಿದ್ದಾರೆ. ಜೈಲಿನ ನಿಯಮ ಪ್ರಕಾರ ಒಬ್ಬ ಖೈದಿಗೆ ಗರಿಷ್ಠ 4,500 ರೂ. ಮನಿ ಆರ್ಡರ್ ಕಳುಹಿಸಬಹುದಾಗಿದೆ.
ಅದರಂತೆ ಆರ್ಯನ್ ಗೆ 4,500 ರೂ.ಗಳ ಮನಿ ಆರ್ಡರ್ ಬಂದಿದೆ. ಇನ್ನು, ಇದಕ್ಕೂ ಮೊದಲು ಶಾರುಖ್ ದಂಪತಿ ಆರ್ಯನ್ ಜೊತೆ ವಿಡಿಯೋ ಕಾಲ್ ಮುಖಾಂತರ ಮಾತನಾಡಿದ್ದಾರೆ ಎನ್ನಲಾಗಿದೆ. ಆರ್ಯನ್ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಅಕ್ಟೋಬರ್ 20 ರವರೆಗೆ ಜೈಲಿನಲ್ಲಿರುವಂತೆ ಸೂಚಿಸಿತ್ತು.