Publish Date: Thu, 14 Oct 2021 (10:10 IST)
Updated Date: Thu, 14 Oct 2021 (10:23 IST)
ಬೆಂಗಳೂರು: ಕೋಟಿಗೊಬ್ಬ 3 ಸಿನಿಮಾ ಬೆಳಗಿನ ಶೋ ರದ್ದಾಗಿರುವುದು ಅಭಿಮಾನಿಗಳಲ್ಲಿ ಆಕ್ರೋಶವುಂಟು ಮಾಡಿದೆ. ಬೆಳಗಿನ ಶೋ ರದ್ದಾಗಿದ್ದಕ್ಕೆ ನಿಜ ಕಾರಣ ಬಯಲಾಗಿದೆ.
ತಾಂತ್ರಿಕ ಕಾರಣಗಳಿಂದ ಬೆಳಗಿನ ಶೋ ರದ್ದು ಮಾಡಲಾಗಿದೆ ಎಂದು ಚಿತ್ರಮಂದಿರಗಳ ಮುಂದೆ ಬೋರ್ಡ್ ಹಾಕಲಾಗಿತ್ತು. ಇದರಿಂದ ನಿರ್ಮಾಪಕ ಸೂರಪ್ಪ ಬಾಬು ಮತ್ತು ಥಿಯೇಟರ್ ಮಾಲಿಕರ ವಿರುದ್ಧ ಕಿಚ್ಚನ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು.
ಸಿನಿಮಾ ಥಿಯೇಟರ್ ಗಳಲ್ಲಿ ಡಿಜಿಟಲ್ ರೂಪದಲ್ಲಿ ಚಿತ್ರ ಪ್ರದರ್ಶನ ಮಾಡಲು ಸಿನಿಮಾಗಳ ಸ್ಯಾಟ್ ಲೈಟ್ ಪ್ರಸಾರ ಮಾಧ‍್ಯಮ ಸಂಸ್ಥೆ ಯುಎಫ್ಒ ಪರವಾನಗಿ ಬೇಕಾಗುತ್ತದೆ. ಆದರೆ ನಿರ್ಮಾಪಕರು ಮತ್ತು ಯುಎಫ್ಒ ನಡುವೆ ಹಣಕಾಸಿನ ಸಮಸ್ಯೆಯಾಗಿರುವುದರಿಂದ ಕೋಟಿಗೊಬ್ಬ 3 ಪ್ರಸಾರಕ್ಕೆ ಯುಎಫ್ಒ ಪರವಾನಗಿ ಸಿಕ್ಕಿರಲಿಲ್ಲ. ಹೀಗಾಗಿ ಶೋ ರದ್ದಾಗಿದೆ.