ಬೆಂಗಳೂರು: ಥಿಯೇಟರ್ ಗಳನ್ನು ಸಂಪೂರ್ಣ ತೆರೆಯಲು ಅವಕಾಶ ನೀಡಿದ ಬಳಿಕ ಚಿತ್ರರಂಗ ಆರ್ಥಿಕವಾಗಿ ಮತ್ತೆ ಹಳಿಗೆ ಬರಲು ಅವಕಾಶವೊಂದಕ್ಕೆ ಕಾಯುತ್ತಿದೆ. ಅದಕ್ಕಾಗಿ ಒಂದೆರಡು ಹಿಟ್ ಚಿತ್ರಗಳ ಅವಶ್ಯಕತೆಯಿದೆ. ಅದೀಗ ಪೂರ್ಣವಾಗುವ ಕಾಲ ಸನ್ನಿಹಿತವಾಗಿದೆ.
ಇಂದಿನಿಂದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಮತ್ತು ದುನಿಯಾ ವಿಜಯ್ ಅವರ ಸಲಗ ಸಿನಿಮಾ ತೆರೆಗೆ ಬರುತ್ತಿದೆ. ಇದು ಚಿತ್ರರಂಗದ ಪಾಲಿಗೆ ಹೊಸ ಆಶಾಕಿರಣವಾಗಿದೆ. ಈ ನಡುವೆ ಕೋಟಿಗೊಬ್ಬ 3 ಪ್ರದರ್ಶನಕ್ಕೆ ಮೊದಲ ಶೋಗೆ ತೊಂದರೆಯಾದರೂ ನಂತರದ ಶೋಗಳು ಪ್ರದರ್ಶನವಾಗುವ ನಿರೀಕ್ಷೆಯಿದೆ.
ದಸರಾ ಪ್ರಯುಕ್ತ ಸಾಲು ಸಾಲು ರಜೆ ಇರುವುದರಿಂದ ಪ್ರೇಕ್ಷಕರು ಥಿಯೇಟರ್ ಗೆ ಬರುತ್ತಾರೆ ಎನ್ನುವುದು ನಿರ್ಮಾಪಕರ, ಥಿಯೇಟರ್ ಮಾಲಿಕರ ಲೆಕ್ಕಾಚಾರ. ಕೋಟಿಗೊಬ್ಬ 3 ರಾಜ್ಯಾದ್ಯಂತ 350 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆ ಕಾಣುತ್ತಿದ್ದು, ಸಲಗ ಕೂಡಾ 300 ಪ್ಲಸ್ ಥಿಯೇಟರ್ ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇವೆರಡೂ ಹಿಟ್ ಆಗಿ ಚಿತ್ರರಂಗಕ್ಕೆ ಹೊಸ ಭರವಸೆ ಸಿಗಲಿ ಎನ್ನುವುದು ಸಿನಿ ಪ್ರಿಯರ ಹಾರೈಕೆ.