Publish Date: Wed, 13 Oct 2021 (09:50 IST)
Updated Date: Wed, 13 Oct 2021 (10:09 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕ್ರಾಂತಿ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮದ ದಿನ ಫಿಕ್ಸ್ ಆಗಿದೆ.
ಅಕ್ಟೋಬರ್ 15 ರಂದು ವಿಜಯದಶಮಿ ದಿನ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ. ಇದು ದರ್ಶನ್ ಅಭಿನಯದ 55 ನೇ ಸಿನಿಮಾ ಎಂಬುದು ವಿಶೇಷ.
ವಿ ಹರಿಕೃಷ್ಣ ನಿರ್ದೇಶನ ಮಾಡುತ್ತಿರುವ ಸಿನಿಮಾವನ್ನು ಯಜಮಾನ ನಿರ್ಮಾಪಕಿ ಶೈಲಜಾ ನಾಗ್ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಅದಾದ ಬಳಿಕ ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ.