ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾ ಇಂದು ಬೆಳಿಗ್ಗಿನ ಶೋ ರದ್ದಾಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸನ್ನ ಥಿಯೇಟರ್ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಬೆಳಗಿನ 7 ಗಂಟೆ ಶೋ ನೋಡಲು ಕಾತುರದಿಂದ ಟಿಕೆಟ್ ಕಾಯ್ದಿರಿಸಿ ಕಾದಿದ್ದರು. ಆದರೆ ಥಿಯೇಟರ್ ಮುಂದೆ ತಾಂತ್ರಿಕ ಕಾರಣಗಳಿಂದ ಬೆಳಗಿನ ಶೋ ರದ್ದುಪಡಿಸಲಾಗಿದೆ. ಆನ್ ಲೈನ್ ಬುಕಿಂಗ್ ಮಾಡಿದವರಿಗೆ ಹಣ ಹಿಂದಿರುಗಿಸಲಾಗುವುದು ಎಂದು ಬೋರ್ಡ್ ಹಾಕಲಾಗಿತ್ತು.
ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಾಸ್ ನ ಸಿನಿಮಾ ನೋಡಕ್ಕೆ ಬೇಕಾಗಿ ಹಬ್ಬ ಬಿಟ್ಟು ಬಂದಿದ್ದೇವೆ. ನಮಗೆ ಸಿನಿಮಾ ತೋರಿಸ್ಬೇಕು ಅಷ್ಟೇ. ಸಮಸ್ಯೆ ಇದ್ದಿದ್ದರೆ ಇವತ್ತು ಬಿಡುಗಡೆ ಮಾಡ್ತೀವಿ ಅಂತ ಟಿಕೆಟ್ ಹಂಚಿದ್ಯಾಕೆ? ವಿಷ್ಣು ಸಾರ್ ಥರಾ ಸುದೀಪ್ ಸರ್ ಗೂ ಕಾಟ ಕೊಡೋದ್ಯಾಕೆ? ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.