Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಕೋಟಿಗೊಬ್ಬ 3 ಕ್ಕೆ ಪುನೀತ್, ಬಾಲಿವುಡ್ ಸ್ನೇಹಿತರ ಶುಭಾಶಯ

ಕಿಚ್ಚ ಸುದೀಪ್ ಕೋಟಿಗೊಬ್ಬ 3 ಕ್ಕೆ ಪುನೀತ್, ಬಾಲಿವುಡ್ ಸ್ನೇಹಿತರ ಶುಭಾಶಯ
ಬೆಂಗಳೂರು , ಗುರುವಾರ, 14 ಅಕ್ಟೋಬರ್ 2021 (09:52 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಇಷ್ಟೊತ್ತಿಗೆ ಬೆಳಗಿನ ಶೋ ಮುಗಿದಿರಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಬೆಳಗಿನ ಶೋಗೆ ಅಡ್ಡಿಯಾಗಿದೆ. ಇದು ಅಭಿಮಾನಿಗಳಲ್ಲಿ ಆಕ್ರೋಶವುಂಟು ಮಾಡಿದೆ.


ಇನ್ನು ಇದಕ್ಕೂ ಮೊದಲು ಕಿಚ್ಚ ಸುದೀಪ್ ಗೆ ಸ್ಯಾಂಡಲ್ ವುಡ್ ‍ಸ್ನೇಹಿತರು, ಬಾಲಿವುಡ್ ಸ್ನೇಹಿತರು ಶುಭ ಕೋರಿದ್ದರು. ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಿಚ್ಚ ಸುದೀಪ್ ಮತ್ತು ಇಡೀ ಕೋಟಿಗೊಬ್ಬ 3 ತಂಡಕ್ಕೆ ಆಲ್ ದಿ ಬೆಸ್ಟ್ ಎಂದಿದ್ದರು. ಇವರಲ್ಲದೆ ಅರ್ಜುನ್ ಜನ್ಯಾ, ಸುನಿಲ್ ಕುಮಾರ್ ದೇಸಾಯಿ ಸೇರಿದಂತೆ ಸ್ಯಾಂಡಲ್ ವುಡ್ ಸ್ನೇಹಿತರು ಶುಭ ಕೋರಿದ್ದಾರೆ.

ಅತ್ತ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಸೇರಿದಂತೆ ಇತರರು ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾ ಯಶಸ್ವಿಯಾಗಲೆಂದು ಶುಭ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಕೋಟಿಗೊಬ್ಬ 3, ಸಲಗ ಅಬ್ಬರ ಶುರು