Publish Date: Wed, 13 Oct 2021 (11:07 IST)
Updated Date: Wed, 13 Oct 2021 (11:09 IST)
ಮುಂಬೈ: ಮಗ ಅರ್ಯನ್ ಖಾನ್ ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡ ಮೇಲೆ ಶಾರುಖ್ ಖಾನ್ ಬ್ರ್ಯಾಂಡ್ ಮೌಲ್ಯಕ್ಕೆ ಕುತ್ತು ಬಂದಿದೆ.
ಈಗಾಗಲೇ ಬೈಜೂಸ್ ಆಪ್ ಶಾರುಖ್ ಕಾಣಿಸಿಕೊಂಡಿರುವ ಜಾಹೀರಾತಿಗೆ ಕತ್ತರಿ ಹಾಕಿದೆ. ಮಗನ ಕೇಸ್ ನಿಂದಾಗಿ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಗೊಳಗಾಗಿದ್ದಾರೆ.
ಹೀಗಾಗಿ ಪ್ರಮುಖ ಬ್ರ್ಯಾಂಡ್ ಗಳ ಅವರ ಜಾಹೀರಾತಿಗೆ ಕತ್ತರಿ ಹಾಕುತ್ತಿವೆ. ಇದರಿಂದಾಗಿ ಅವರ ಬ್ರ್ಯಾಂಡ್ ವಾಲ್ಯೂ ಕುಸಿಯುತ್ತಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಲಿದ್ದಾರೆ.