Publish Date: Mon, 11 Oct 2021 (11:04 IST)
Updated Date: Mon, 11 Oct 2021 (11:05 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಗೆ ಇಂದು ಜನ್ಮ ದಿನದ ಸಂಭ್ರಮ. ಈ ವಿಶೇಷ ದಿನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆಯುವಾಗ ಬಿಗ್ ಬಿಗೆ ತಮ್ಮ ವಯಸ್ಸೇ ಮರೆತುಹೋಗಿದೆ.
80 ರ ಹರೆಯಕ್ಕೆ ಕಾಲಿಡುತ್ತಿದ್ದೇನೆ ಎಂದು ಬಿಗ್ ಬಿ ಬರೆದುಕೊಂಡಿದ್ದರು. ಆದರೆ ಇದನ್ನು ಗಮನಿಸಿದ ಪುತ್ರಿ ಶ್ವೇತಾ ಅಪ್ಪ ಮಾಡಿದ ತಪ್ಪನ್ನು ತಿದ್ದಿದ್ದಾರೆ.
ನಿಮಗೆ 80 ಅಲ್ಲ, 79 ನೇ ವಯಸ್ಸಿಗೆ ಕಾಲಿಡುತ್ತಿದ್ದೀರಿ ಎಂದು ಶ್ವೇತ ತಿದ್ದಿದ್ದಾರೆ. ಇನ್ನು, ಅಮಿತಾಭ್ ಬಚ್ಚನ್ ಗೆ ಸೆಲೆಬ್ರಿಟಿಗಳು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.