Select Your Language

Notifications

webdunia
webdunia
webdunia
Monday, 7 April 2025
webdunia

ನಾನು ಅವರನ್ನು ಲವ್ ಮಾಡ್ತೀನಿ, ಓಪನ್ ಆಗಿಯೇ ಶಿವಣ್ಣ ಹೇಳಿದ್ದು ಯಾರಿಗೆ?!

ಸಲಗ
ಬೆಂಗಳೂರು , ಸೋಮವಾರ, 11 ಅಕ್ಟೋಬರ್ 2021 (10:12 IST)
ಬೆಂಗಳೂರು: ನಾನು ಅವರನ್ನು ತುಂಬಾ ಲವ್ ಮಾಡ್ತೀನಿ. ಬಹಳ ಹಿಂದಿನಿಂದಲೂ ನಾವು ಲವರ್ಸ್..! ಹೀಗಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಸಲಗ’ ಪ್ರಿ ರಿಲೀಸ್ ಈವೆಂಟ್ ವೇದಿಕೆಯಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಶಿವಣ್ಣ ಹೀಗಂತ ಹೇಳಿದ್ದು ಯಾರಿಗೆ ಗೊತ್ತಾ?!


ಹೀಗಂತ ಶಿವಣ್ಣ ಹೇಳಿದ್ದು, ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ. ಓಂ ಸಿನಿಮಾ ಸಂದರ್ಭದಲ್ಲಿ ಯಾವಾಗಲೂ ಕೂದಲು ಕಣ್ಣಿಗೆ ತಾಕುವಂತೆ ಎದುರು ಹಾಕಿಕೊಳ್ಳಲು ಹೇಳುತ್ತಿದ್ದರು. ಆಗ ನನಗೆ ಅವರ ಮೇಲೆ ಕೋಪ ಬರುತ್ತಿತ್ತು. ಆಗ ಅವರು ಶಿವಣ್ಣ ನಿಮ್ಮನ್ನು ರಥಸಪ್ತಮಿ ಕಾಲದಿಂದಲೂ ಲವ್ ಮಾಡ್ತೀನಿ ಎಂದಿದ್ರು. ಆ ಬಳಿಕ ನಾವು ಲವರ್ಸ್ ತರ ಇದ್ದೇವೆ. ನಾನು ಯಾವಾಗಲೂ ಅವರನ್ನು ಪ್ರೀತಿಸುತ್ತೇನೆ ಎಂದು ಉಪೇಂದ್ರ ಬಗ್ಗೆ ಶಿವಣ್ಣ ಹೇಳಿದ್ದಾರೆ.

ಇನ್ನು, ಸಲಗ ಪ್ರಿ ರಿಲೀಸ್ ಈವೆಂಟ್ ನಲ್ಲಿ ನಾಯಕ ದುನಿಯಾ ವಿಜಯ್ ಮತ್ತು ತಂಡಕ್ಕೆ ಶುಭ ಹಾರೈಸಲು ಗಣ್ಯರ ದಂಡೇ ಬಂದಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್ ರಾಜ್ ಕುಮಾರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಕ್ಟೋಬರ್ 14 ಕ್ಕೆ ಸಲಗ ತೆರೆ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಮಾ’ ಚುನಾವಣೆ: ನಟ ಪ್ರಕಾಶ್ ರಾಜ್ ಗೆ ಮುಖಭಂಗ