Select Your Language

Notifications

webdunia
webdunia
webdunia
webdunia

‘ಮಾ’ ಚುನಾವಣೆ: ನಟ ಪ್ರಕಾಶ್ ರಾಜ್ ಗೆ ಮುಖಭಂಗ

‘ಮಾ’ ಚುನಾವಣೆ: ನಟ ಪ್ರಕಾಶ್ ರಾಜ್ ಗೆ ಮುಖಭಂಗ
ಹೈದರಾಬಾದ್ , ಸೋಮವಾರ, 11 ಅಕ್ಟೋಬರ್ 2021 (09:40 IST)
ಹೈದರಾಬಾದ್: ತೆಲುಗು ಕಲಾವಿದರ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಕನ್ನಡ ಮೂಲದ ನಟ ಪ್ರಕಾಶ್ ರಾಜ್ ಸೋತು ಮುಖಭಂಗ ಅನುಭವಿಸಿದ್ದಾರೆ.


ವಿಷ್ಣು ಮಂಚು ಎದುರು ಸ್ಪರ್ಧಿಸಿದ್ದ ಪ್ರಕಾಶ್ ರಾಜ್ ಗೆ ಸೋಲಾಗಿದೆ. ವಿಷ್ಣು ಬಳಗ 10 ಸ್ಥಾನ ಗೆದ್ದರೆ, ಪ್ರಕಾಶ್ ರಾಜ್ 8 ಸ್ಥಾನ ಗೆದ್ದಿದ್ದಾರೆ. ಈ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಇಬ್ಬರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಪ್ರಕಾಶ್ ರಾಜ್ ಮೂಲ ತೆಲುಗು ಕಲಾವಿದನಲ್ಲ ಎನ್ನುವ ಕಾರಣಕ್ಕೆ ಅವರ ಸ್ಪರ್ಧೆಗೆ ವಿರೋಧವೂ ವ್ಯಕ್ತವಾಗಿತ್ತು.

ಹಾಗಿದ್ದರೂ ಸ್ಪರ್ಧಿಸಿದ್ದ ಪ್ರಕಾಶ್ ರಾಜ್ ಸೋತು ಮುಖಭಂಗ ಅನುಭವಿಸಿದ್ದಾರೆ. ‘ಮಾ’ದಲ್ಲಿ ಕೆಲಸ ಸರಿಯಾಗಿ ಆಗುತ್ತಿಲ್ಲ. ಸರಿ ಮಾಡಲು ನಾನು ಅಧ‍್ಯಕ್ಷನಾಗಬೇಕು ಎಂದು ಪ್ರಕಾಶ್ ರಾಜ್ ಪ್ರತಿಪಾದಿಸುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಗರುಡ ಗಮನ ವೃಷಭ ವಾಹನ ಟ್ರೈಲರ್ ರೆಡಿಯಾಯ್ತು