Publish Date: Thu, 19 Aug 2021 (09:56 IST)
Updated Date: Thu, 19 Aug 2021 (09:07 IST)
ಹೈದರಾಬಾದ್: ಇತ್ತೀಚೆಗೆ ಶೂಟಿಂಗ್ ಸೆಟ್ ನಲ್ಲಿ ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಈಗ ಫಿಟ್ ಆಗಿದ್ದು ಶೂಟಿಂಗ್ ಮರಳಿದ್ದಾರೆ.
ಚೆನ್ನೈನಲ್ಲಿ ಧನುಷ್ ಸಿನಿಮಾ ಶೂಟಿಂಗ್ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದ ಪ್ರಕಾಶ್ ರಾಜ್, ಹೈದರಾಬಾದ್ ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ಇದೀಗ ಚೇತರಿಸಿಕೊಂಡಿರುವ ಪ್ರಕಾಶ್ ರಾಜ್ ತಮ್ಮ ಮುಂದಿನ ಚಿತ್ರ ಪೊನ್ನಿಯನ್ ಸೆಲ್ವಂ ಚಿತ್ರೀಕರಣಕ್ಕಾಗಿ ಅಸ್ಸಾಂ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.