Select Your Language

Notifications

webdunia
webdunia
webdunia
webdunia

ಭಜರಂಗಿ 2 ಸಿನಿಮಾ ತಂಡದಿಂದ ಬಂತೊಂದು ಹೊಸ ಸುದ್ದಿ

ಭಜರಂಗಿ 2 ಸಿನಿಮಾ ತಂಡದಿಂದ ಬಂತೊಂದು ಹೊಸ ಸುದ್ದಿ
ಬೆಂಗಳೂರು , ಬುಧವಾರ, 18 ಆಗಸ್ಟ್ 2021 (09:54 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ತಂಡ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ಕೊಟ್ಟಿದೆ.


ಭಜರಂಗಿ ಸಿನಿಮಾ ಇದೇ ಗಣೇಶ ಹಬ್ಬದ ಸಂದರ್ಭದಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಈಗ ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡದೇ ಇರುವ ಕಾರಣಕ್ಕೆ ರಿಲೀಸ್ ಮುಂದೂಡಿಕೆಯಾದರೂ ಅಚ್ಚರಿಯಿಲ್ಲ.

ಈ ನಡುವೆ ಆಗಸ್ಟ್ 20 ರಂದು ಅಂದರೆ ಇದೇ ಶುಕ್ರವಾರ ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಶುಕ್ರವಾರ ಬೆಳಿಗ್ಗೆ 10.05 ಕ್ಕೆ ಹಾಡೊಂದರ ಲಿರಿಕಲ್ ವಿಡಿಯೋ ಲಾಂಚ್ ಮಾಡಲಿದೆ. ಎ. ಹರ್ಷ ನಿರ್ದೇಶನದ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೂ ಟ್ಯೂಬ್ ನಲ್ಲೂ ಟ್ರೆಂಡ್ ಆಯ್ತು ರಾಜ್ ಕುಮಾರ್ ಲರ್ನಿಂಗ್ ಆಪ್