Select Your Language

Notifications

webdunia
webdunia
webdunia
webdunia

ತೆಲುಗಿನಲ್ಲಿ ರಿಲೀಸ್ ಆಗ್ತಿದೆ ಕನ್ನಡದ ದಿಯಾ ಸಿನಿಮಾ

ತೆಲುಗಿನಲ್ಲಿ ರಿಲೀಸ್ ಆಗ್ತಿದೆ ಕನ್ನಡದ ದಿಯಾ ಸಿನಿಮಾ
ಬೆಂಗಳೂರು , ಮಂಗಳವಾರ, 17 ಆಗಸ್ಟ್ 2021 (09:16 IST)
ಬೆಂಗಳೂರು: ಕನ್ನಡದಲ್ಲಿ ಮೋಡಿ ಮಾಡಿದ್ದ ‘ದಿಯಾ’ ಸಿನಿಮಾ ಈಗ ತೆಲುಗಿನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಗುರುವಾರ ಅಂದರೆ ಆಗಸ್ಟ್ 19 ರಂದು ಸಿನಿಮಾ ತೆರೆಗೆ ಬರಲಿದೆ.


ಎಲ್ಲಾ ಅಂದುಕೊಂಡಂತೆ ಆಗಿದ್ದರೆ ದಿಯಾ ಕಳೆದ ವರ್ಷವೇ ತೆಲುಗಿನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಅದೀಗ ನೆರವೇರುತ್ತಿದೆ.

ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕನ್ನಡದಲ್ಲಿ ಭಾರೀ ಸದ್ದು ಮಾಡಿತ್ತು. ಹೊಸಬರ ಈ ಚಿತ್ರ ಈಗ ತೆಲುಗಿನಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ. ನಿನ್ನೆ ಇದರ ಪ್ರಿ ರಿಲೀಸ್ ಈವೆಂಟ್ ಕೂಡಾ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನವರಸನಾಯಕ ಜಗ್ಗೇಶ್ ‘ರಂಗನಾಯಕ’ ಶುರು