Select Your Language

Notifications

webdunia
webdunia
webdunia
webdunia

ಜನಗಣಮನ ಕರೆಕ್ಟ್ ಆಗಿ ಹಾಡಿ ಎಂದ ನೆಟ್ಟಿಗನಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 16 ಆಗಸ್ಟ್ 2021 (09:27 IST)
ಬೆಂಗಳೂರು: 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಿಚ್ಚ ಸುದೀಪ್ ರಾಷ್ಟ್ರಗೀತೆ ‘ಜನಗಣಮನ’ ಹಾಡುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಇದಕ್ಕೆ ನೆಟ್ಟಿಗರೊಬ್ಬರು ತೀರಾ ಕಟು ಭಾಷೆಯಲ್ಲಿ ಕಾಮೆಂಟ್ ಮಾಡಿದ್ದರು.

 
ಕರೆಕ್ಟ್ ಆಗಿ ರಾಷ್ಟ್ರಗೀತೆ ಹಾಡಿ ಸರ್. ನಿಮ್ಮನ್ನು ತುಂಬಾ ಜನ ಫಾಲೋ ಮಾಡ್ತಾರೆ. ನೀವು ಟಾಪ್ ಆಕ್ಟರ್ ಆಗಿರಬಹುದು ಆದರೆ 48-52 ಸೆಕೆಂಡ್ ಒಳಗೆ ಹಾಡಬೇಕು ಎನ್ನುವ ಕಾಮನ್ ಸೆನ್ಸ್ ಕೂಡಾ ಇಲ್ವಾ? ಎಂದು ಖಾರವಾಗಿ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ‘ತೀರಾ ಕಟು ಮಾತು. ಆದರೂ ನಿಮ್ಮ ಮಾತನ್ನು ಒಪ್ಪುತ್ತೇನೆ. ನನ್ನ ದೇಶದ ಮೇಲಿನ ಪ್ರೀತಿಯಿಂದ ಏನು ಮಾಡಬಹುದೋ ಅದನ್ನು ಮಾಡಿದೆ. ಜೈ ಹಿಂದ್’ ಎಂದು ಅಷ್ಟೇ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಶುರುವಾಗಲಿದೆ ಸರಿಗಮಪ ಶೋ