Publish Date: Wed, 25 Aug 2021 (10:36 IST)
Updated Date: Wed, 25 Aug 2021 (10:43 IST)
ಚೆನ್ನೈ: ಬಹುಭಾಷಾ ನಟ ಪ್ರಕಾಶ್ ರಾಜ್ ಈಗ ಮತ್ತೆ ಮದುವೆಯಾಗಿದ್ದಾರಂತೆ! ಈ ವಿಚಾರವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ!
ಸದ್ಯಕ್ಕೆ ಪೊನ್ನಿಯನ್ ಸೆಲ್ವನ್ ಚಿತ್ರೀಕರಣಕ್ಕಾಗಿ ಮಧ‍್ಯಪ್ರದೇಶದಲ್ಲಿರುವ ಪ್ರಕಾಶ್ ರಾಜ್ ತಮ್ಮ ಮಕ್ಕಳ ಎದುರೇ ಮರು ಮದುವೆಯಾಗಿದ್ದಾರೆ. ಆದರೆ ಹುಡುಗಿ ಬೇರೆಯವರಲ್ಲ. ತಮ್ಮ ಪತ್ನಿ ಪೋನಿ ವರ್ಮಾರನ್ನೇ ಮತ್ತೆ ಮದುವೆಯಾಗಿದ್ದಾರೆ.
ಪ್ರಕಾಸ್ ಮತ್ತು ಪೋನಿ ನಿನ್ನೆ 11 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ವೇಳೆ ಪುತ್ರ ವೇದಾಂತ್ ಗೆ ತನ್ನ ಅಪ್ಪ-ಅಮ್ಮನ ಮದುವೆ ನೋಡಬೇಕೆಂದು ಆಸೆಯಾಗಿದೆ. ಅವನ ಆಸೆ ನೆರವೇರಿಸಲು ಪ್ರಕಾಶ್-ಪೋನಿ ದಂಪತಿ ಪರಸ್ಪರ ರಿಂಗ್ ಎಕ್ಸ್ ಚೇಂಜ್ ಮಾಡಿ ಕಿಸ್ ಮಾಡಿ ಔಪಚಾರಿಕವಾಗಿ ಮದುವೆಯಾಗಿದ್ದಾರೆ. ಇದಕ್ಕೆ ಪ್ರಕಾಶ್ ಮೊದಲನೇ ಪತ್ನಿ ಮಕ್ಕಳಾದ ಮೇಘನಾ, ಪೂಜಾ ಕೂಡಾ ಸಾಕ್ಷಿಯಾಗಿದ್ದರು.