Publish Date: Sat, 09 Oct 2021 (17:01 IST)
Updated Date: Sat, 09 Oct 2021 (17:02 IST)
ಮುಂಬೈ: ಆರ್ಯನ್ ಖಾನ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಅಧಿಕಾರಿಗಳು ಇಂದು ಶಾರುಖ್ ಖಾನ್ ಕಾರು ಚಾಲಕನನ್ನು ವಿಚಾರಣೆಗೆ ಕರೆಸಿಕೊಂಡಿದ್ದಾರೆ.
ನಿನ್ನೆ ಆರ್ಯನ್ ಮತ್ತು ಇತರ ಆರೋಪಿಗಳನ್ನು ಆರ್ಥರ್ ಜೈಲಿಗೆ ರವಾನಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು ಎನ್ ಸಿಬಿ ಪೊಲೀಸರು ಶಾರುಖ್ ಮನೆಯ ಕಾರು ಚಾಲಕನನ್ನು ವಿಚಾರಣೆ ನಡೆಸಿದ್ದಾರೆ.
ಸದ್ಯಕ್ಕೆ ಆರ್ಯನ್ ಮತ್ತು ಇತರರು ನ್ಯಾಯಾಂಗ ವಶದಲ್ಲಿ ಮುಂದುವರಿಯಲಿದ್ದಾರೆ. ಅವರ ಪರ ವಕೀಲರು ಸೆಷನ್ಸ್ ಕೋರ್ಟ್ ನಲ್ಲಿ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.