Select Your Language

Notifications

webdunia
webdunia
webdunia
Monday, 14 April 2025
webdunia

ಕಷ್ಟಗಳೇ ನಿನ್ನ ಗಟ್ಟಿಗೊಳಿಸಲಿದೆ: ಆರ್ಯನ್ ಗೆ ಹೃತಿಕ್ ರೋಷನ್ ಸಂದೇಶ

ಆರ್ಯನ್ ಖಾನ್
ಮುಂಬೈ , ಗುರುವಾರ, 7 ಅಕ್ಟೋಬರ್ 2021 (17:09 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ನಟ ಹೃತಿಕ್ ರೋಷನ್ ಸ್ಪೂರ್ತಿ ತುಂಬುವ ಸಂದೇಶ ನೀಡಿದ್ದಾರೆ.

 

ಸಾಮಾಜಿಕ ಜಾಲತಣದಲ್ಲಿ ಆರ್ಯನ್ ಗೆ ಧೈರ್ಯ ತುಂಬುವ ಪೋಸ್ಟ್ ಹಾಕಿರುವ ಹೃತಿಕ್ ಈ ಕಷ್ಟಗಳೇ ನಿನ್ನನ್ನು ಹೀರೋ ಆಗಿ ಮೇಲೇಳಲು ಸಹಾಯ ಮಾಡಲಿದೆ ಎಂದಿದ್ದಾರೆ.

‘ಮೈ ಡಿಯರ್ ಆರ್ಯನ್, ಜೀವನ ಎಂಬುದು ವಿಚಿತ್ರ ಪ್ರಯಾಣ.ದೇವರು ಕಠಿಣ ಚೆಂಡನ್ನೇ ನಿನ್ನ ಎದುರಿಗೆ ತಂದಿಡುತ್ತಾನೆ. ಈಗ ನಿನಗೆ ಎಲ್ಲವೂ ಗೊಂದಲ, ಕಠಿಣ, ಹತಾಶೆ, ಕೋಪ ಬರಬಹುದು. ಆದರೆ ಇವುಗಳೇ ನಿನ್ನನ್ನು ಗಟ್ಟಿಗೊಳಿಸುತ್ತವೆ. ಇದರಿಂದ ಮೇಲೆದ್ದರೇ ಒಬ್ಬ ಹಿರೋ ಹುಟ್ಟಿಕೊಳ್ಳುತ್ತಾನೆ. ತಪ್ಪು, ವೈಫಲ್ಯ, ಗೆಲುವು, ಯಶಸ್ಸು ಎಲ್ಲವೂ ಒಂದೇ. ಆದರೆ ಅದರಲ್ಲಿ ಯಾವುದನ್ನು ನಿನ್ನ ಜೊತೆಗೆ ಇಟ್ಟುಕೊಳ್ಳಬೇಕು ಎಂದು ಕಲಿಯಬೇಕು. ನಿನ್ನನ್ನು ಚಿಕ್ಕಂದಿನಿಂದ ನೋಡುತ್ತಿರುವೆ. ಇದೆಲ್ಲವನ್ನೂ ಎದುರಿಸಲು ಕಲಿ. ಇದು ನಿನ್ನ ಭವಿಷ್ಯ ರೂಪಿಸುವ ವಿಚಾರಗಳು. ಸದ್ಯಕ್ಕೆ ಇದೆಲ್ಲವನ್ನೂ ಶಾಂತಿಯಿಂದ ಎದುರಿಸಲು ಕಲಿಯಬೇಕು. ನಿನ್ನ ಮೇಲೆ ಸದಾ ಪ್ರೀತಿಯಿರುತ್ತದೆ’ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಟೋಬರ್ 11 ರವರೆಗೆ ಆರ್ಯನ್ ಖಾನ್ ಕಸ್ಟಡಿಗೆ ಮನವಿ ಮಾಡಿದ ಎನ್ ಸಿಬಿ