ಮುಂಬೈ: ಡ್ರಗ್ ಕೇಸ್ ಗೆ ಸಂಬಂಧಪಟ್ಟಂತೆ ಬಂಧಿತರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿಜ್ಞಾನ ಪುಸ್ತಕ ಒದಗಿಸುವಂತೆ ಕೇಳಿದ್ದಾನಂತೆ. ಇದನ್ನು ಪುರಸ್ಕರಿಸಿರುವ ಎನ್ ಸಿಬಿ ಅಧಿಕಾರಿಗಳು ಆರ್ಯನ್ ಕೇಳಿದ ಪುಸ್ತಕ ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಡ್ರಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರ್ಯನ್ ಮೊಬೈಲ್ ನಲ್ಲಿ ಕೆಲವು ಸಂದೇಶಗಳನ್ನು ಕಳುಹಿಸಲಾಗಿದೆ ಎಂಬ ಅನುಮಾನಗಳ ಹಿನ್ನಲೆಯಲ್ಲಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಆರ್ಯನ್ ಹಾಗೂ ಇತರ ಮೊಬೈಲ್ ಗಳ ಪರಿಶೀಲನೆ ನಡೆಸಲಾಗುವುದು. ಇದರಲ್ಲಿ ಡ್ರಗ್ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!