ಮುಂಬೈ: ಮುಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಸಿಕ್ಕಿಬಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಇತರರ ಕುರಿತಾಗಿ ಎನ್ ಸಿಬಿ ತನಿಖೆ ಚುರಕುಗೊಳಿಸಿದೆ.
ಹಡಗಿನಲ್ಲಿ ಪಾರ್ಟಿ ಮಾಡಲು ಬಿಟ್ ಕಾಯಿನ್ ಬಳಸಿ ಡ್ರಗ್ ಖರೀದಿ ಮಾಡಿರಬಹುದು ಎಂಬ ಅನುಮಾನ ಎನ್ ಸಿಬಿ ಅಧಿಕಾರಿಗಳಲ್ಲಿದ್ದು, ಈ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ.
ಇನ್ನು, ಶಾರುಖ್ ಪುತ್ರ ಸೇರಿದಂತೆ ಇತರ 10 ಮಂದಿಯನ್ನು ಅಕ್ಟೋಬರ್ 7 ರವರೆಗೆ ಎನ್ ಸಿಬಿ ವಶಕ್ಕೊಪ್ಪಿಸಿದೆ. ಘಟನೆ ವೇಳೆ ಆರ್ಯನ್ ಕೈಯಲ್ಲಿ ಡ್ರಗ್ ಕಂಡುಬರಲಿಲ್ಲ. ಆದರೆ ಆತನ ಸ್ನೇಹಿತರ ಬಳಿಕ ಡ್ರಗ್ಸ್ ಪತ್ತೆಯಾಗಿತ್ತು. ಇವರಿಗೆ ಯಾವ ಮೂಲದಿಂದ ಬಂದಿದೆ ಎಂಬ ಬಗ್ಗೆ ಎನ್ ಸಿಬಿ ತನಿಖೆ ನಡೆಸುತ್ತಿದೆ.