ಮುಂಬೈ: ಡ್ರಗ್ ಕೇಸ್ ನಲ್ಲಿ ಎನ್ ಸಿಬಿ ಅಧಿಕಾರಿಗಳಿಂದ ಬಂಧಿತರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪರ ಮಾತನಾಡಿದ ಸುನಿಲ್ ಶೆಟ್ಟಿಗೆ ನೆಟ್ಟಿಗರಿಂದ ತಪರಾಕಿ ಸಿಕ್ಕಿದೆ.
ಆರ್ಯನ್ ಇನ್ನೂ ಮಗು. ಅವನಿಗೆ ಸ್ವಲ್ಪ ಉಸಿರಾಡಲು ಬಿಡಿ. ಪಾರ್ಟಿ ಮೇಲೆ ದಾಳಿ ಮಾಡಿದಾಗ ಎಲ್ಲರ ಜೊತೆಗೆ ಆ ಹುಡುಗನೂ ಡ್ರಗ್ ಸೇವಿಸಿದ್ದಾನೆ ಎಂದು ಅಂದುಕೊಂಡಿರಬಹುದು. ಇನ್ನೂ ನಿಜಾಂಶ ಹೊರಗೆ ಬಂದಿಲ್ಲ. ಅಲ್ಲಿಯವರೆಗೆ ಆ ಮಗುವಿಗೆ ಉಸಿರಾಡಲು ಬಿಡಿ ಎಂದು ಸುನಿಲ್ ಶೆಟ್ಟಿ ಅನುಕಂಪ ವ್ಯಕ್ತಪಡಿಸಿದ್ದರು.
ಇದಕ್ಕೆ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 23 ವರ್ಷದ ಆತ ಮಗುವಲ್ಲ. ಈ ವಯಸ್ಸಿನಲ್ಲಿ ಕೆಲವು ಹೆಮ್ಮೆಯ ಸೈನಿಕರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ ಎಂದು ಕೆಲವರು ತಿರುಗೇಟು ಕೊಟ್ಟರೆ ಇನ್ನು ಕೆಲವರು ಜವಾಬ್ಧಾರಿಯುತವಾಗಿ ನಡೆದುಕೊಳ್ಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.