Select Your Language

Notifications

webdunia
webdunia
webdunia
webdunia

ನಿಮ್ ಕಣ್ಣಿಗೆ ರಾಜ್ ಕುಂದ್ರಾ ಥರಾ ಕಾಣಿಸ್ತಿದ್ದೀನಾ? ಶಿಲ್ಪಾ ಶೆಟ್ಟಿ ಗರಂ

ನಿಮ್ ಕಣ್ಣಿಗೆ ರಾಜ್ ಕುಂದ್ರಾ ಥರಾ ಕಾಣಿಸ್ತಿದ್ದೀನಾ? ಶಿಲ್ಪಾ ಶೆಟ್ಟಿ ಗರಂ
ಮುಂಬೈ , ಸೋಮವಾರ, 27 ಸೆಪ್ಟಂಬರ್ 2021 (09:45 IST)
ಮುಂಬೈ: ಸುದ್ದಿಗೋಷ್ಠಿಯೊಂದರಲ್ಲಿ ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದಾಗ ನಟಿ ಶಿಲ್ಪಾ ಶೆಟ್ಟಿ ಗರಂ ಆದ ಪ್ರಸಂಗ ಎದುರಾಗಿದೆ.


ಮಾಧ‍್ಯಮ ಪ್ರತಿನಿಧಿಗಳು ಶಿಲ್ಪಾಗೆ ರಾಜ್ ಕುಂದ್ರಾ ಪ್ರಕರಣದ ಬಗ್ಗೆ ಕೇಳಿದಾಗ ಶಿಲ್ಪಾ ‘ನಾನು ರಾಜ್ ಕುಂದ್ರಾನಾ? ನಿಮಗೆ ರಾಜ್ ಕುಂದ್ರಾ ಥರಾ ಕಾಣಿಸ್ತಿದ್ದೀನಾ? ನಾನು ಯಾರು?’ ಎಂದು ಗರಂ ಆಗಿ ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ ಒಬ್ಬ ಸೆಲೆಬ್ರಿಟಿಯಾಗಿ ವಿವರಣೆ ನೀಡುತ್ತಾ ಕೂರಬಾರದು, ದೂರುತ್ತಾ ಕೂರಬಾರದು ಎಂದು ನಂಬಿದ್ದೇನೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಎರಡು ತಿಂಗಳ ನ್ಯಾಯಾಂಗ ಬಂಧನ ಅನುಭವಿಸಿದ್ದ ರಾಜ್ ಕುಂದ್ರಾ ಜಾಮೀನಿನ ಮೇಲೆ ಹೊರಬಂದಿದ್ದರು. ಈ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಶಿಲ್ಪಾ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ ಟೈಟಲ್ ಇಂದು ಅನಾವರಣ