Publish Date: Sun, 03 Oct 2021 (07:08 IST)
Updated Date: Sun, 03 Oct 2021 (07:09 IST)
ಮುಂಬೈ: ಮುಂಬೈನಲ್ಲಿ ಲಾಂಚ್ ಆಗಿದ್ದ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಒಬ್ಬರ ಪುತ್ರ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿಯಿದೆ. ಆದರೆ ಆತ ಯಾರು ಎನ್ನುವುದನ್ನು ಸದ್ಯಕ್ಕೆ ಪೊಲೀಸರು ಬಹಿರಂಗಪಡಿಸಿಲ್ಲ.
ಪ್ರಯಾಣಿಕರಂತೆ ಮರು ವೇಷಧಾರಿಗಳಾಗಿ ಹಡಗಿನೊಳಗೆ ಪ್ರವೇಶಿಸಿದ್ದ ಎನ್ ಸಿಬಿ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದು ಮಧ್ಯಾಹ್ನದ ಬಳಿಕ ಅಧಿಕಾರಿಗಳು ನೀಡುವ ಸಾಧ‍್ಯತೆಯಿದೆ.