Publish Date: Sun, 26 Sep 2021 (09:27 IST)
Updated Date: Sun, 26 Sep 2021 (09:46 IST)
ಇಂಧೋರ್: ಜನರಿಗೆ ರಕ್ಷಣೆ ಮಾಡಬೇಕಾದ ಪೊಲೀಸರ ಮೇಲೆಯೇ ದೌರ್ಜನ್ಯ ನಡೆದರೆ ಕೇಳುವವರು ಯಾರು? ಇಂತಹದ್ದೇ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಮೂವರು ಕಾಮುಕರು ಗ್ಯಾಂಗ್ ರೇಪ್ ಮಾಡಿದ್ದು ಘಟನೆಯ ವಿಡಿಯೋ ಮಾಡಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಈ ಸಂಬಂಧ ಸಂತ್ರಸ್ತೆ ಪೊಲೀಸ್ ದೂರು ದಾಖಲಿಸಿದ್ದು, ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಜೊತೆಗೆ ಈ ಹಿಂದೆ ಸಂತ್ರಸ್ತೆಗೆ ಫೇಸ್ ಬುಕ್ ನಲ್ಲಿ ಸ್ನೇಹವಿತ್ತು. ಆದರೆ ಈಗ ಅನ್ ಫ್ರೆಂಡ್ ಮಾಡಿದ್ದರಿಂದ ಆಕ್ರೋಶಗೊಂಡಿದ್ದ ಆರೋಪಿ ತನ್ನ ಸಹೋದರನ ಬರ್ತ್ ಡೇ ಪಾರ್ಟಿ ಎಂದು ಸಂತ್ರಸ್ತೆಯನ್ನು ಆಹ್ವಾನಿಸಿದ್ದ. ಪಾರ್ಟಿಗೆ ಬಂದ ಸಂತ್ರಸ್ತೆಯ ಮೇಲೆ ಸಹಚರರೊಂದಿಗೆ ಅತ್ಯಾಚಾರವೆಸಗಿದ್ದಾನೆ. ವಿಪರ್ಯಾಸವೆಂದರೆ ಆರೋಪಿಯ ಕೃತ್ಯಕ್ಕೆ ಆತನ ತಾಯಿಯೇ ಸಹಾಯ ಮಾಡಿದ್ದಳು. ಈ ಸಂಬಂಧ ಆಕೆಯನ್ನೂ ಬಂಧಿಸಲಾಗಿದೆ.