Publish Date: Thu, 23 Sep 2021 (12:25 IST)
Updated Date: Thu, 23 Sep 2021 (09:57 IST)
ಬೆಂಗಳೂರು: ಕೊರೋನಾದಿಂದಾಗಿ ಪತಿ ತೀರಿಕೊಂಡ ದುಃಖದಲ್ಲಿ ಇಬ್ಬರು ಮಕ್ಕಳನ್ನು ಕೊಂದು ಸಾಯಲು ಹೊರಟ ತಾಯಿಯನ್ನು ನೆರೆಹೊರೆಯವರು ರಕ್ಷಿಸಿದ್ದಾರೆ.
ಯಲಹಂಕಾದಲ್ಲಿ ಈ ಘಟನೆ ನಡೆದಿದೆ. ಕೆಲವು ಸಮಯದ ಹಿಂದೆ ಪತಿ ಕೊರೋನಾದಿಂದಾಗಿ ತೀರಿಕೊಂಡಿದ್ದರು. ಇದರಿಂದ ಮನನೊಂದಿದ್ದ ಮಹಿಳೆ ಈಗ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನೇಣು ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಳು.
ಆದರೆ ಕಿರಿಯ ಪುತ್ರಿ ತಪ್ಪಿಸಿಕೊಂಡು ನೆರೆಹೊರೆಯವರನ್ನು ಕೂಗಿ ಕರೆದಿದ್ದಾಳೆ. ಆದರೆ ಅಷ್ಟರಲ್ಲಿ ಹಿರಿಯ ಪುತ್ರಿ ಸಾವನ್ನಪ್ಪಿದ್ದು, ಮಹಿಳೆ ಬಚಾವಾಗಿದ್ದಾಳೆ.