Publish Date: Tue, 21 Sep 2021 (11:34 IST)
Updated Date: Tue, 21 Sep 2021 (09:08 IST)
ಚೆನ್ನೈ: ಕೊರೋನಾ ಬಳಿಕ ಶಾಲೆಗಳೆಲ್ಲವೂ ಆನ್ ಲೈನ್ ನಲ್ಲೇ ನಡೆಯುತ್ತಿವೆ. ಇದರ ಲಾಭದಷ್ಟೇ ದುರ್ಲಾಭವೂ ಆಗುತ್ತಿರುವುದು ದುರದೃಷ್ಟಕರ.
ತಮಿಳುನಾಡಿನಲ್ಲಿ 39 ವರ್ಷದ ವ್ಯಕ್ತಿಯೋರ್ವ ತನ್ನ ಮಗನ ಶಾಲೆಯ ವ್ಯಾಟ್ಸಪ್ ಗ್ರೂಪ್ ನಲ್ಲಿ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸುತ್ತಿದ್ದ. ಈ ಬಗ್ಗೆ ಈಗ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಶಿಕ್ಷಣದ ಉದ್ದೇಶಕ್ಕೆ ವ್ಯಾಟ್ಸಪ್ ಗ್ರೂಪ್ ನಿರ್ಮಿಸಿದರೆ ಅದರಲ್ಲಿ ಆರೋಪಿ ತಂದೆ ಅಶ್ಲೀಲ ಫೋಟೋ ರವಾನಿಸುತ್ತಿದ್ದ. ವಿಚಾರಣೆ ವೇಳೆ ಆರೋಪಿ ಮದ್ಯದ ಅಮಲಿನಲ್ಲಿ ಸ್ನೇಹಿತನಿಗೆ ಕಳುಹಿಸಬೇಕಾದ ಸಂದೇಶಗಳನ್ನು ಶಾಲೆಯ ಗ್ರೂಪ್ ಗೆ ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾನೆ.