Select Your Language

Notifications

webdunia
webdunia
webdunia
webdunia

ಇಲಿ ಪಾಷಾಣದಿಂದ ಬ್ರಷ್ ಮಾಡಿ ಸಾವನ್ನಪ್ಪಿದ ಯುವತಿ

ಇಲಿ ಪಾಷಾಣದಿಂದ ಬ್ರಷ್ ಮಾಡಿ ಸಾವನ್ನಪ್ಪಿದ ಯುವತಿ
ಮುಂಬೈ , ಬುಧವಾರ, 15 ಸೆಪ್ಟಂಬರ್ 2021 (09:40 IST)
ಮುಂಬೈ: ಕೆಲವೊಮ್ಮೆ ಟೂಥ್ ಪೇಸ್ಟ್ ಎಂದು ಬೇರೊಂದು ಕ್ರೀಂ ಬಳಸಿ ಬ್ರಷ್ ಮಾಡಿ ಎಡವಟ್ಟಾಗುವುದು ಸಹಜ. ಆದರೆ ಇಲ್ಲೊಬ್ಬ ಯುವತಿ ಇದೇ ಎಡವಟ್ಟಿನಿಂದ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.


ಮುಂಬೈನಲ್ಲಿ 18 ವರ್ಷದ ಯುವತಿಯೊಬ್ಬಳು ಟೂಥ್ ಪೇಸ್ಟ್ ಎಂದುಕೊಂಡು ಇಲಿ ಪಾಷಾಣದಿಂದ ಬ್ರಷ್ ಮಾಡಿ ಪರಿಣಾಮ ಸಾವನ್ನಪ್ಪಿದ ಘಟನೆ ನಡೆದಿದೆ. ಇಲಿ ಕೊಲ್ಲಲು ಬಳಸುವ ಕ್ರೀಂ ಕೂಡಾ ಪೇಸ್ಟ್ ನ್ನೇ ಹೋಲುತ್ತಿತ್ತು. ಇವೆರಡೂ ಅಕ್ಕಪಕ್ಕದಲ್ಲೇ ಇಟ್ಟುಕೊಂಡಿದ್ದರಿಂದ ಈ ದುರಂತ ನಡೆದಿದೆ.

ಘಟನೆ ನಡೆದ ತಕ್ಷಣ ಮನೆಯವರು ಬೈಯಬಹುದೆಂದು ಯುವತಿ ವಿಚಾರ ಮುಚ್ಚಿಟ್ಟಿದ್ದಳು. ಆದರೆ ತೀರಾ ಅಸ್ವಸ್ಥಗೊಂಡ ಬಳಿಕ ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ ಆಕೆಯ ಜೀವ ಉಳಿಸಲಾಗಲಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೊಲ್, ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ತರಲು ಕಾಂಗ್ರೆಸ್ ಹೋರಾಟ ಮಾಡಲಿ: ಸಿಟಿ ರವಿ