Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಪೆಟ್ರೊಲ್, ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ತರಲು ಕಾಂಗ್ರೆಸ್ ಹೋರಾಟ ಮಾಡಲಿ: ಸಿಟಿ ರವಿ

webdunia
ಬುಧವಾರ, 15 ಸೆಪ್ಟಂಬರ್ 2021 (09:20 IST)
ಬೆಂಗಳೂರು : ಕಾಂಗ್ರೆಸ್ ನವರಂತೆ ದೇಶದ ಚಿನ್ನವನ್ನ ಪ್ರಧಾನಿ ಮೋದಿ ಅವರು ಅಡ ಇಟ್ಟಿಲ್ಲ. ಬೆಲೆ ಏರಿಕೆ ಮಾಡಿ ಮೋದಿ ಅವರು ಭ್ರಷ್ಟಾಚಾರ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಂದಾದ ಬದಲಾವಣೆಗಳು, ಜಾಗತಿಕ ಮಟ್ಟದಲ್ಲಿ ಹಣದುಬ್ಬರದಿಂದಾಗಿ ಬೆಲೆ ಏರಿಕೆಯಾಗಿದೆ. ಅತಿ ಹೆಚ್ಚು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿದೆ.
ಕಾಂಗ್ರೆಸ್ಗೆ ಬೆಲೆ ಏರಿಕೆ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಆ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ , ಡಿಸೇಲ್ ಬೆಲೆಯನ್ನ ಇಳಿಕೆ ಮಾಡಲಿ ಎಂದು ಸಿ.ಟಿ. ರವಿ ಸವಾಲು ಹಾಕಿದರು. ಪೆಟ್ರೋಲ್ , ಡಿಸೇಲ್ ಅನ್ನ ಜಿಎಸ್ ಟಿ ಅಡಿಯಲ್ಲಿ ತರಲಿ ಎಂದು ಕಾಂಗ್ರೆಸ್ ಹೋರಾಟ ಮಾಡಲಿ. ದೇಶದಾದ್ಯಂತ ಪೆಟ್ರೋಲ್ , ಡಿಸೇಲ್ ದರ ಸಮಾನವಾಗಿರುತ್ತದೆ ಎಂದು ಹೇಳಿದರು.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಭೀಕರ ಅಪಘಾತ: ಎಲೆಕ್ಟ್ರಾನಿಕ್ ಸಿಟಿ ಫ್ಲೈವರ್ನಿಂದ ಬಿದ್ದು ಯುವಕ-ಯುವತಿ ಸಾವು