Select Your Language

Notifications

webdunia
webdunia
webdunia
webdunia

ಇದೇ 24ರಂದು ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ - ಪ್ರಧಾನಿ ಮೋದಿ ಭೇಟಿ

ಇದೇ 24ರಂದು ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ - ಪ್ರಧಾನಿ ಮೋದಿ ಭೇಟಿ
ವಾಷಿಂಗ್ಟನ್ , ಮಂಗಳವಾರ, 21 ಸೆಪ್ಟಂಬರ್ 2021 (08:56 IST)
ವಾಷಿಂಗ್ಟನ್ : ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ 24 ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿ ಮಾಡಲಿದ್ದಾರೆ.
Photo Courtesy: Google

ಸಭೆಯಲ್ಲಿ, ಉಭಯ ದೇಶಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ವಿಷಯಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಲಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಜೋ ಬೈಡೆನ್ ಅವರೊಂದಿಗಿನ ಸಭೆಗೆ ಮುನ್ನ ಪ್ರಧಾನಿ ಮೋದಿ ಶ್ವೇತ ಭವನದಲ್ಲಿ ಕ್ವಾಡ್ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು, ಇಂಡೋ-ಪೆಸಿಫಿಕ್ ಸಂಬಂಧಗಳು, ಕೊರೋನಾ ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತಿತರ ಅಂಶಗಳ ಬಗ್ಗೆ ಅವರೊಂದಿಗೆ ಚರ್ಚಿಸಲಿದ್ದಾರೆ. ಈ ಸಭೆಗೂ ಮುನ್ನ ಈ ತಿಂಗಳ 23ರಂದು ಜಪಾನ್ ಹಾಗೂ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳನ್ನು ಮೋದಿ ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

5-11 ವರ್ಷದ ಮಕ್ಕಳಿಗೆ ʼಫೈಜರ್ ಲಸಿಕೆʼ ಸುರಕ್ಷಿತ