ತಮ್ಮ ಕೊರೊನಾ ವೈರಸ್ ಲಸಿಕೆಯು ಸುರಕ್ಷಿತೆ ಸಾಭೀತು ಪಡೆಸಿದೆ ಫಿಜರ್ ಮತ್ತು ಬಯೋಎನ್ ಟೆಕ್ ಸೋಮವಾರ ತಿಳಿಸಿದೆ. ಐದರಿಂದ 11 ವರ್ಷದ ಮಕ್ಕಳಲ್ಲಿ 'ದೃಢವಾದ' ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ಪಾದಿಸಿದ್ದು, ಶೀಘ್ರದಲ್ಲೇ ನಿಯಂತ್ರಕ ಅನುಮೋದನೆಯನ್ನ ಪಡೆಯಲಿದೆ ಎಂದು ಕಂಪನಿ ತಿಳಿಸಿದೆ.ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ಲಸಿಕೆಯನ್ನು 12 ಮತ್ತು ಅದಕ್ಕಿಂತ ಹೆಚ್ಚಿನ ಜನರಿಗೆ ನೀಡುವುದಕ್ಕಿಂತ ಕಡಿಮೆ ಡೋಸೇಜ್ʼನಲ್ಲಿ ನೀಡಲಾಗುವುದು ಎಂದು ತಿಳಿಸಿವೆ. ಇನ್ನು ತಮ್ಮ ದತ್ತಾಂಶವನ್ನ ʼಸಾಧ್ಯವಾದಷ್ಟು ಬೇಗʼ ಯುರೋಪಿಯನ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್ ಮತ್ತು ವಿಶ್ವದಾದ್ಯಂತದ ನಿಯಂತ್ರಣ ಸಂಸ್ಥೆಗಳಿಗೆ ಸಲ್ಲಿಸುವುದಾಗಿ ಹೇಳಿದೆ.