Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ದೇಶದಲ್ಲಿ ದಾಖಲೆ ಮಟ್ಟದಲ್ಲಿ ಲಸಿಕೆ ಹಂಚಿಕೆ

Narendra Modi's Birthday Celebrated yesterday
ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ದೇಶದಲ್ಲಿ ದಾಖಲೆ ಮಟ್ಟದಲ್ಲಿ ಲಸಿಕೆ ಹಂಚಿಕೆ ಮಾಡಲಾಗಿದೆ ಅಂತಾ ಸುಧಾಕರ್ ತಿಳಿಸಿದ್ರು. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 10 ಗಂಟೆಗಳ ಅವಧಿಯಲ್ಲಿ 2 ಕೋಟಿ 50 ಲಕ್ಷ ಲಸಿಕೆ ನೀಡಲಾಗಿದೆ. ಕರ್ನಾಟಕದಲ್ಲಿ  30 ಲಕ್ಷ ಗುರಿಯನ್ನು ನೀಡಲಾಗಿತ್ತು. 31 ಲಕ್ಷಕ್ಕೂ ಹೆಚ್ಚು ಲಸಿಕೆ ಕೊಡಲಾಗಿದೆ. 14 ಜಿಲ್ಲೆಗಳಲ್ಲಿ ಕೊಟ್ಟ ಟಾರ್ಗೆಟ್ ಗೂ ಹೆಚ್ಚು ಮಾಡಲಾಗಿದೆ. ಅತೀ ಹೆಚ್ಚು ಲಸಿಕೆ ಕೊಟ್ಟ ಜಿಲ್ಲೆ ಬೆಂಗಳೂರು 5 ಲಕ್ಷದಷ್ಟು ಕೊಡಲಾಗಿದೆ. ಇಡೀ ದೇಶದಲ್ಲಿ ಎರಡನೇ ಜಿಲ್ಲೆ ಬೆಳಗಾವಿ ಹಾಗೂ ಮೂರನೇ ಜಿಲ್ಲೆ ಬಿಹಾರದ ಒಂದು ಜಿಲ್ಲೆ.  ಇದರಲ್ಲಿ 16.96ಲಕ್ಷ ಡೋಸ್ ಮಹಿಳೆಯರಿಗೆ ನೀಡಲಾಗಿದೆ. 14.53 ಪುರುಷರು ಡೋಸ್ ತೆಗದುಕೊಂಡಿದ್ದಾರೆ. 5 ಕೋಟಿ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ. ಕಲಬುರ್ಗಿ, ಕೊಪ್ಪಳ, ಉಡುಪಿ, ರಾಯಚೂರಿನಲ್ಲಿ ಕಡಿಮೆ ಲಸಿಕೆ ಆಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ಮಹತ್ತರ ಬೆಳವಣಿಗೆ