Select Your Language

Notifications

webdunia
webdunia
webdunia
webdunia

ಶಾಲೆ ಶುರು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾ

ಶಾಲೆ ಶುರು ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು , ಸೋಮವಾರ, 20 ಸೆಪ್ಟಂಬರ್ 2021 (14:03 IST)
ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ನಿಧಾನವಾಗಿ ಶಾಲೆಗಳು ಆರಂಭವಾಗ್ತಿವೆ. ಆದ್ರೆ ಅನೇಕ ಕಡೆ ಶಾಲೆಗಳು ಶುರುವಾಗಿಲ್ಲ. ಸಣ್ಣ ಮಕ್ಕಳ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ. ಎಲ್ಲ ಶಾಲೆಗಳನ್ನು ತೆರೆಯುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಅರ್ಜಿಯನ್ನು ಮಗುವಿನ ಹೆಸರಿನಲ್ಲಿ ಸಲ್ಲಿಸಲಾಗಿದೆ. ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಮಗು ತನ್ನ ಅಧ್ಯಯನದತ್ತ ಗಮನ ಹರಿಸಬೇಕು. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಮಯ ವ್ಯರ್ಥ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಅರ್ಜಿಗಳನ್ನು ಸಲ್ಲಿಸುವುದನ್ನು ಹಲವು ಬಾರಿ ನೋಡಲಾಗಿದೆ. ಇದರಿಂದ ನ್ಯಾಯಾಲಯದ ಸಹಾನುಭೂತಿ ಆ ಅರ್ಜಿಯ ಕಡೆಗೆ ಬರುತ್ತದೆ ಎಂದು ಭಾವಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ನಾವು ಹೇಳುವುದಿಲ್ಲ. ಆದರೆ ಈ ಅರ್ಜಿಯ ಉದ್ದೇಶವೇನೆಂದು ನೀವೇ ನೋಡಿ. ಮಗು ತನ್ನ ಅಧ್ಯಯನದತ್ತ ಗಮನ ಹರಿಸಬೇಕೇ ಹೊರತು ಇಂಥ ಅರ್ಜಿಯತ್ತ ಅಲ್ಲ ಎಂದು ಕೋರ್ಟ್ ಹೇಳಿದೆ. ಶಾಲೆಯನ್ನು ತೆರೆಯುವ ನಿರ್ಧಾರ ಸರ್ಕಾರದ್ದ. ಪ್ರತಿ ರಾಜ್ಯದ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೋರ್ಟ್ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಫ್ಘಾನಿಸ್ತಾನದಲ್ಲಿ ` IPL' ಪ್ರಸಾರಕ್ಕೆ ನಿಷೇಧ ಹೇರಿದ ತಾಲಿಬಾನ್! ಕಾರಣ ಏನು ಗೊತ್ತಾ?