Select Your Language

Notifications

webdunia
webdunia
webdunia
webdunia

ಕೊರೊನಾ ಲಸಿಕೆ ಅಭಿಯಾನದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದ ಬಿಎಂಸಿ

ಕೊರೊನಾ ಲಸಿಕೆ ಅಭಿಯಾನದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದ ಬಿಎಂಸಿ
ಮುಂಬೈ , ಶನಿವಾರ, 18 ಸೆಪ್ಟಂಬರ್ 2021 (08:59 IST)
ಮುಂಬೈ : ಮಹಿಳೆಯರಿಗೆಂದೇ ವಿಶೇಷವಾಗಿ ಕೋವಿಡ್ ಲಸಿಕೆ ಅಭಿಯಾನವನ್ನು ಆರಂಭಿಸುವ ಮೂಲಕ ಬೃಹತ್ ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಈ ಅಭಿಯಾನದ ಲಾಭ ಪಡೆದ ಅನೇಕ ಮಹಿಳೆಯರು ಸರ್ಕಾರದ ಈ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
Photo Courtesy: Google

ಬಿಕೆಸಿ ಲಸಿಕಾ ಕೇಂದ್ರದಲ್ಲಿ ಎರಡನೇ ಡೋಸ್ ಸ್ವೀಕರಿಸಿ ಮಾತನಾಡಿದ ಸ್ನೇಹಲ್, ದೈನಂದಿನ ಜೀವನದಲ್ಲಿ ಮಹಿಳೆಯರಿಗೆ ಬಿಡುವೇ ಸಿಗದ ಕಾರಣ ನಮಗೆ ಲಸಿಕೆಯ ಸ್ಲಾಟ್ ಸಮಯಕ್ಕೆ ಸರಿಯಾಗಿ ತೆರಳಲು ಆಗುತ್ತಿರಲಿಲ್ಲ. ಅಲ್ಲದೇ ಅನೇಕ ಸಂದರ್ಭಗಳಲ್ಲಿ ಲಸಿಕೆಗೆ ಪೂರ್ವ ನೋಂದಣಿ ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಅನೇಕ ಮಹಿಳೆಯರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ವೆಚ್ಚವನ್ನು ಭರಿಸುವುದು ಸಾಧ್ಯವಿರಲಿಲ್ಲ. ಇಂತಹ ಸಂದರ್ಭದಲ್ಲಿ ಬಿಎಂಸಿ ಮಾಡಿರುವ ಈ ವಿನೂತನ ಪ್ರಯತ್ನ ನಿಜಕ್ಕೂ ಸಹಕಾರಿ ಎಂದು ಹೇಳಿದರು.
ಮಹಿಳೆಯರಿಗೆಂದೆ ಮೀಸಲಿರುವ ಈ ವಿಶೇಷ ಲಸಿಕಾ ಅಭಿಯಾನವು ಬೆಳಗ್ಗೆ 10:30ರಿಂದ 6:30ರ ವರೆಗೆ 24 ವಾರ್ಡ್ಗಳಲ್ಲಿ ನಡೆದಿದೆ. ಇಲ್ಲಿ ಸ್ಲಾಟ್ಗೆ ಮುಂಗಡ ನೋಂದಣಿ ಮಾಡುವ ಅಗತ್ಯವಿಲ್ಲ. ಯಾವುದೇ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಮಹಿಳೆಯರು ಬಂದು ಮೊದಲ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಪಡೆಯಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Drink and Drive ಟೆಸ್ಟ್ ಆರಂಭ; ಕುಡಿದು ವಾಹನ ಚಲಾಯಿಸಿದರೆ ದಂಡ ಎಚ್ಚರ!