Select Your Language

Notifications

webdunia
webdunia
webdunia
webdunia

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ವ್ಯಾಕ್ಸಿನೇಷನ್ ಅಭಿಯಾನ

Massive vaccination campaign
bangalore , ಗುರುವಾರ, 16 ಸೆಪ್ಟಂಬರ್ 2021 (22:05 IST)
ನಾಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ವ್ಯಾಕ್ಸಿನೇಷನ್ ಅಭಿಯಾನ ನಡೆಯುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತುರ್ತು ಸುದ್ದಿಗೋಷ್ಟಿ ನಡೆಸಿದರು.
 
ನಾಳೆ ರಾಜ್ಯಾದ್ಯಂತ ಬೃಹತ್ ಕೋವಿಡ್ ಲಸಿಕಾ ಮೇಳ ಮಾಡ್ತಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲೂ ವಿಶೇಷವಾಗಿ ಲಸಿಕಾ ಅಭಿಯಾನ ಮಾಡ್ತಿದ್ದೇವೆ. ಹಾಗಾಗಿ ನಾಳೆ 5 ಲಕ್ಷ ವ್ಯಾಕ್ಸಿನ್ ನೀಡುವ ಟಾರ್ಗೆಟ್ ಇದೆ. ಅಷ್ಟೇ ಅಲ್ಲದೇ ನಿತ್ಯ ಪ್ರತಿ ವಾರ್ಡ್‌ನಲ್ಲಿ 1 ಲಕ್ಷ ಡೋಸ್ ಲಸಿಕೆಯನ್ನು ನೀಡುತ್ತಾ ಬಂದಿದ್ದೇವೆ. ಹಾಗೆ ನಾಳೆ ಪ್ರತಿ ವಾರ್ಡ್‌ನಲ್ಲಿ ಸರಾಸರಿ 10 ವ್ಯಾಕ್ಸಿನ್ ಕೇಂದ್ರಗಳ ಓಪನ್ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ. 
 
ಇನ್ನೂ ಎಲ್ಲೆಡೆ ಲಸಿಕೆ ಹಾಕುವವರನ್ನೂ ನಿಯೋಜನೆ ಮಾಡಲಾಗಿದ್ದು, ನಾಳೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಉಚಿತ ಲಸಿಕೆ ನೀಡಲಾಗುತ್ತೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2019- 20 ನೇ ಸಾಲಿನ ಶಾಲಾ ಶುಲ್ಕ ಶೇ. 15 ರಷ್ಟು ಕಡಿತ-ಹೈಕೋರ್ಟ್ ಆದೇಶ