Select Your Language

Notifications

webdunia
webdunia
webdunia
webdunia

ಅಫ್ಘಾನಿಸ್ತಾನದಲ್ಲಿ ` IPL' ಪ್ರಸಾರಕ್ಕೆ ನಿಷೇಧ ಹೇರಿದ ತಾಲಿಬಾನ್! ಕಾರಣ ಏನು ಗೊತ್ತಾ?

ಅಫ್ಘಾನಿಸ್ತಾನದಲ್ಲಿ ` IPL' ಪ್ರಸಾರಕ್ಕೆ ನಿಷೇಧ ಹೇರಿದ ತಾಲಿಬಾನ್! ಕಾರಣ ಏನು ಗೊತ್ತಾ?
ಕಾಬೂಲ್ , ಸೋಮವಾರ, 20 ಸೆಪ್ಟಂಬರ್ 2021 (13:51 IST)
ಕಾಬೂಲ್ : ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಕ್ರಿಕೆಟ್ ಟೂರ್ನಿ ಇಸ್ಲಾಂ ವಿರೋಧಿ ಎಂದು ಆರೋಪಿಸಿ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಯ ಪ್ರಸಾರಕ್ಕೆ ತಾಲಿಬಾನ್ ನಿಷೇಧ ಹೇರಿದೆ.
Photo Courtesy: Google

ಇತ್ತೀಚೆಗೆ ತಾಲಿಬಾನಿ ಉಗ್ರರ ವಶವಾಗಿದ್ದ ಅಫ್ಘಾನಿಸ್ತಾನದಲ್ಲೂ ಸಹ ಈ ಟೂರ್ನಿ ಪ್ರಸಾರವಾ ಗುತ್ತಿತ್ತು. ಆದರೆ, ಇದನ್ನು ಇದೀಗ ಇಸ್ಲಾಂ ವಿರೋಧಿಎಂದು ಆರೋಪಿಸಿರುವ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಐಪಿಎಲ್ 2021 ಪ್ರಸಾರಕ್ಕೆ ನಿಷೇಧ ಹೇರಿದ್ದಾರೆ ಎಂದು ತಿಳಿದುಬಂದಿದೆ.
ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಮಹಿಳೆ ತುಂಡುಡುಗೆಯಲ್ಲಿ ನೃತ್ಯ ಮಾಡುತ್ತಾರೆ. ಇದು ಇಸ್ಲಾಂ ವಿರೋಧಿಯಾಗಿದ್ದು, ಇದೇ ಕಾರಣಕ್ಕೆ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಯ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ ಎಂದು ಮಾಜಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಧ್ಯಮ ವ್ಯವಸ್ಥಾಪಕ ಎಂ. ಇಬ್ರಾಹಿಂ ಮೊಮಾಂಡ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಈ ಬಿಜೆಪಿ ನಾಯಕನಿಗೆ ನೀಡಲಾಗಿದೆಯಂತೆ 5 ಡೋಸ್ ಕೋವಿಡ್ ಲಸಿಕೆ..!