Publish Date: Mon, 20 Sep 2021 (09:28 IST)
Updated Date: Mon, 20 Sep 2021 (09:29 IST)
ದುಬೈ: ಐಪಿಎಲ್ 14 ರ ಎರಡನೇ ಭಾಗದ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯವನ್ನು ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ.
ಕೊರೋನಾ ವಾರಿಯರ್ ಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಇಂದಿನ ಪಂದ್ಯದಲ್ಲಿ ಆರ್ ಸಿಬಿ ನೀಲಿ ಜರ್ಸಿ ತೊಟ್ಟು ಆಡಲಿದೆ. ಐಪಿಎಲ್ 14 ರ ಮೊದಲ ಹಂತದಲ್ಲಿ ಕೊಹ್ಲಿ ಪಡೆ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು.
ಒಟ್ಟು 7 ಪಂದ್ಯವಾಡಿರುವ ಆರ್ ಸಿಬಿ 10 ಅಂಕಗಳನ್ನು ಸಂಪಾದಿಸಿದೆ. ಈಗಾಗಲೇ ಬ್ಯಾಟಿಂಗ್ ಆಧಾರ ಸ್ತಂಬ ಎಬಿಡಿ ವಿಲಿಯರ್ಸ್ ಅಭ್ಯಾಸದಲ್ಲಿ ಶತಕ ಭಾರಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಆದರೆ ನಾಯಕ ಕೊಹ್ಲಿ ಫಾರ್ಮ್ ಕೊಂಚ ಚಿಂತೆಗೆ ಕಾರಣವಾಗಿದೆ. ಬೌಲಿಂಗ್ ನಲ್ಲಿ ಗರಿಷ್ಠ ವಿಕೆಟ್ ಟೇಕರ್ ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ತಂಡದ ಬಲ. ಇಂದಿನ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7.30 ಕ್ಕೆ ಆರಂಭವಾಗಲಿದೆ.