ದುಬೈ: 45 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈ ಕೊನೆಗೆ ಪಂದ್ಯ ಗೆದ್ದಿದ್ದು ಇತಿಹಾಸ. ಐಪಿಎಲ್ 14 ರ ಎರಡನೇ ಹಂತದ ಮೊದಲ ಪಂದ್ಯವೇ ರೋಚಕ.
ಮುಂಬೈ ಇಂಡಿಯನ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು ಚೆನ್ನೈ 20 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಋತುರಾಜ್ ಗಾಯಕ್ ವಾಡ್ 58 ಎಸೆತಗಳಲ್ಲಿ 88 ರನ್ ಗಳಿಸಿದರು. ಇದರಿಂದಾಗಿ ಚೆನ್ನೈ ಗೌರವಯುತ ಮೊತ್ತ ಕಲೆ ಹಾಕಿತು.
ಈ ಮೊತ್ತ ಬೆನ್ನತ್ತಿದ ಮುಂಬೈಗೆ ಚೆನ್ನೈಯ ಸಂಘಟಿತ ಬೌಲಿಂಗ್ ಕಡಿವಾಣ ಹಾಕಿತು. ಸೌರಬ್ ತಿವಾರಿ ಅಜೇಯ 50 ರನ್ ಗಳಿಸಿದರು. ಮೊಣಕಾಲಿನ ಗಾಯಕ್ಕೊಳಗಾಗಿದ್ದ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿತ್ತು. ಅವರ ಸ್ಥಾನದಲ್ಲಿ ಕಿರನ್ ಪೊಲ್ಲಾರ್ಡ್ ತಂಡ ಮುನ್ನಡೆಸಿದರು. ಅಂತಿಮವಾಗಿ ಮುಂಬೈ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಯಿತು.