ದುಬೈ: ಐಪಿಎಲ್ 14 ರ ಎರಡನೇ ಭಾಗದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭಿಕ ಕುಸಿತ ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಧೋನಿ ಪಡೆ ಇತ್ತೀಚೆಗಿನ ವರದಿ ಬಂದಾಗ 12 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ.
ಫಾ ಡು ಪ್ಲೆಸಿಸ್, ಮೊಯಿನ್ ಅಲಿ ಶೂನ್ಯಕ್ಕೆ ನಿರ್ಗಮಿಸಿದರೆ ಅಂಬಟಿ ರಾಯುಡು ಖಾತೆ ತೆರೆಯುವ ಮೊದಲೇ ಗಾಯಗೊಂಡು ಪೆವಿಲಿಯನ್ ಸೇರಿಕೊಂಡರು. ಆರಂಭಿಕ ಋತುರಾಜ್ ಗಾಯಕ್ ವಾಡ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದು 33 ರನ್ ಗಳಿಸಿ ಆಡುತ್ತಿದ್ದಾರೆ. ನಾಯಕ ಧೋನಿ ಕೊಡುಗೆ ಕೇವಲ 3 ರನ್. ಸುರೇಶ್ ರೈನಾ ಕೂಡಾ 4 ರನ್ ಗೇ ಔಟಾಗಿದ್ದಾರೆ.