Publish Date: Sun, 19 Sep 2021 (10:21 IST)
Updated Date: Sun, 19 Sep 2021 (10:22 IST)
ದುಬೈ: ಐಪಿಎಲ್ 14 ರ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ.
ಈ ಪಂದ್ಯಕ್ಕೆ ಮೊದಲು ಸಿಎಸ್ ಕೆ ತಂಡಕ್ಕೆ ಗಾಯಾಳುಗಳದ್ದೇ ಚಿಂತೆಯಾಗಿದೆ. ಆರಂಭಿಕ ಸ್ಟಾರ್ ಆಟಗಾರ ಫಾ ಡು ಪ್ಲೆಸಿಸ್, ಡ್ವಾನ್ ಬ್ರಾವೋ ಗಾಯಾಳುಗಳಾಗಿದ್ದಾರೆ. ಇವರಿಬ್ಬರ ಲಭ್ಯತೆ ಬಗ್ಗೆ ಅಂತಿಮ ಕ್ಷಣದಲ್ಲಿ ತಿಳಿಯಲಿದೆ.
ಇನ್ನು ಫಾ ಡು ಪ್ಲೆಸಿಸ್ ಅಲಭ್ಯರಾದರೆ ರಾಬಿನ್ ಉತ್ತಪ್ಪ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಇನ್ನು, ಇನ್ನೊಬ್ಬ ಆಲ್ ರೌಂಡರ್ ಸ್ಯಾಮ್ ಕ್ಯುರೇನ್ ಇನ್ನೂ ಕ್ವಾರಂಟೈನ್ ಅವಧಿ ಮುಗಿಸಿಲ್ಲ. ಹೀಗಾಗಿ ಮೊದಲ ಪಂದ್ಯಕ್ಕೆ ಅವರೂ ಅಲಭ್ಯರಾಗಿದ್ದಾರೆ.