Publish Date: Sun, 19 Sep 2021 (08:52 IST)
Updated Date: Sun, 19 Sep 2021 (08:53 IST)
ದುಬೈ: ಐಪಿಎಲ್ 14 ರ ಎರಡನೇ ಭಾಗಕ್ಕೆ ಇಂದಿನಿಂದ ಚಾಲನೆ ಸಿಗುತ್ತಿದೆ. ಇಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಜಿದ್ದಾಜಿದ್ದಿನ ಪಂದ್ಯ ನಡೆಯಲಿದೆ.
ರೋಹಿತ್ ಪಡೆ ಮತ್ತು ಧೋನಿ ಪಡೆ ನಡುವಿನ ಪಂದ್ಯವೆಂದರೆ ಪ್ರೇಕ್ಷರಲ್ಲಿ ಕುತೂಹಲ ಸಹಜವಾಗಿರುತ್ತದೆ. ಒಂದನೇ ಭಾಗದಲ್ಲಿ ಎರಡೂ ತಂಡಗಳದ್ದು ಸಮಬಲದ ಹೋರಾಟವಾಗಿತ್ತು.
ಅಂಕ ಪಟ್ಟಿಯಲ್ಲಿ ಚೆನ್ನೈ 7 ಪಂದ್ಯಗಳನ್ನಾಡಿ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಅಷ್ಟೇ ಪಂದ್ಯವಾಡಿ ನಾಲ್ಕನೇ ಸ್ಥಾನದಲ್ಲಿದೆ. ಕೊನೆಯದಾಗಿ ಆಡಿದ್ದ ಪಂದ್ಯವನ್ನು ಮುಂಬೈ ಗೆದ್ದುಕೊಂಡಿತ್ತು. ಆದರೆ ಈಗ ಪರಿಸ್ಥಿತಿ, ಪಂದ್ಯ ನಡೆಯುವ ವಾತಾವರಣ, ಮೈದಾನ ಎಲ್ಲವೂ ಬದಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಯಾರ ಮೇಲುಗೈಯಾಗುತ್ತದೆ ಕಾದುನೋಡಬೇಕಿದೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದೆ.