ಮುಂಬೈ: ಟೀಂ ಇಂಡಿಯಾ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ಪ್ರಕಟಿಸಿದ ವಿರಾಟ್ ಕೊಹ್ಲಿಯದ್ದು ಸ್ವಯಂ ನಿರ್ಧಾರವಾಗಿತ್ತು ಎಂದು ಮೂಲಗಳು ಹೇಳಿವೆ.
ಕೊಹ್ಲಿ ರಾಜೀನಾಮೆ ನೀಡಲು ಬಿಸಿಸಿಐ ಅಧಿಕಾರಿಗಳಿಂದ ಯಾವುದೇ ಒತ್ತಡವಿರಲಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದರು ಎಂದು ತಿಳಿದುಬಂದಿದೆ.
ತಮ್ಮ ಮೇಲಾಗುತ್ತಿರುವ ಕೆಲಸದ ಒತ್ತಡ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೊಹ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ಬಿಸಿಸಿಐ ಒತ್ತಡ ಹೇರಿತ್ತು ಎಂಬ ವರದಿಗಳೆಲ್ಲಾ ಸುಳ್ಳು ಎಂದು ಬಿಸಿಸಿಐ ಮೂಲಗಳೇ ಹೇಳಿವೆ.